Tuesday, June 30, 2009
ಪಥಾನುಯಾಯಿ
Tuesday, June 23, 2009
ಒಂದಿಷ್ಟು ಫೋಟೋಗಳು...
ಊಟಿಯ ಒಂದು ಪರ್ವತ. ನೋಡ್ತಾ ಇದ್ರೆ ಹಾಗೆ ಇದ್ದು ಬಿಡುವಾಂತ ಕಾಣ್ತದೆ..!
ಇದೂ ಅಷ್ಟೆ... ಊಟಿಯಲ್ಲಿ ನನ್ನ ಕ್ಯಾಮೆರಾಕ್ಕೆ ಸಿಕ್ಕಿದ್ದು...!
ಚೆಂದದ ಹೂವು ಮಾರಾಯ್ರೆ...!ವಿಂಟೇಜ್ ಅಲ್ಲ, ಇದು ಹೆರಿಟೇಜ್...!
ರೋಗಿಗಳ ನಾಡಿ ಮಿಡಿತ ಪರೀಕ್ಷೆ ಮಾಡುವ ಡಾಕ್ಟರ್ ಕೈಯಲ್ಲಿ ವಿಂಟೇಜ್ ಕಾರಿನ ಸ್ಟೇರಿಂಗ್!. ಹೌದು, ಬೆಂಗಳೂರಿನ ಡಾಕ್ಟರ್ ರವಿಪ್ರಕಾಶ್ ಅವರ ಆರೈಕೆಯಲ್ಲಿ ನೂರಕ್ಕೂ ಅಧಿಕ ಐತಿಹಾಸಿಕ ಕಾರುಗಳು ಮತ್ತು ೩೨ ಮೋಟಾರ್ ಬೈಕ್ಗಳು ಆರೋಗ್ಯ ಪೂರ್ಣವಾಗಿವೆ!. ಅಲ್ಲಿ ಇಲ್ಲಿ ಓಡಾಡ್ತ, ನಲಿದಡ್ತಾ ಇವೆ...!ವಿಂಟೇಜ್ ಕಾರುಗಳನ್ನು ಸಂಗ್ರಹಿಸುವ ಅವರ ಹವ್ಯಾಸ ಆರಂಭ ಆದದ್ದೇ ಒಂದು ವಿಶೇಷ ರೀತಿಯಲ್ಲಿ. ೧೯೭೯ರಲ್ಲಿ ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ರ
Tuesday, June 16, 2009
ಇದು ತಾಲಿಬಾನ್ ಗನ್ ಅಲ್ಲ ಮಾರಾಯ್ರೆ..!
ಬಾಳೆಗೊನೆ, ತೆಂಗಿನಕಾಯಿ ಸಿಕ್ಕೋದೇ ಕಷ್ಟ ಆಗಿದೆ ಅಂತ ಹೇಳ್ತಾರೆ. ಬಾಳೆಗೊನೆಯಲ್ಲಿ ಪೂಮ್ಬೆ (ಹೂವು) ಮಾತ್ರ ಉಂಟಂತೆ. ಬೊಂಡ (ಎಳನೀರು) ಎಲ್ಲ ಮರದ ಕೆಳಗೆ, ಒಬ್ಬನ ತೋಟದ ಅಡಿಕೆ ಇನ್ನೊಬ್ಬನ ತೋಟದಲ್ಲಿ ಉಂಟಂತೆ...! ಹೀಗೆ ಮಂಗಗಳ ಮೇಲೆ ತುಂಬ ಕಂಪ್ಲೇಂಟ್ ಉಂಟು. Friday, June 12, 2009
ಸಂಚಾರವಾಣಿ ಮತ್ತು ನೀಲಿ ಹಲ್ಲು...!
ಭುವಿಯಲ್ಲು ನೀನೆ...
ಎಲ್ಲೆಲ್ಲು ನೀನೆ,
ನನ್ನ (ಕೈ) ಯಲ್ಲೂ ನೀನೆ...!
ಯಾಕಪ್ಪಾ ಅಷ್ಟೊಳ್ಳೆ ಸಿನಿಮಾ ಹಾಡನ್ನ ರಿಮೇಕ್ ಮಾಡ್ತಾ ಇದ್ದಿ ಅಂಥ ಬೈಬೇಡಿ. ಅದಕ್ಕಾಗಿ ಕ್ಷಮೆ ಇರ್ಲಿ ಅಂತ ಕೆಳ್ಕೊಳ್ತೇನೆ. ಎಲ್ಲಾ ಕಡೆ ಮೊಬೈಲ್ನದ್ದೇ ಕಾರು ಬಾರು (ಕಾರಿನಲ್ಲೂ-ಬಾರಿನಲ್ಲು). ಅದರ ಕುರಿತಾಗಿ ಹೇಳೋ ಮೊದಲು ಇದೊಂದು ಮುನ್ನುಡಿ ಅಷ್ಟೆ!.
ಶಾಲೆಯೊಂದರಲ್ಲಿ ಮೇಷ್ಟ್ರು ಹುಡುಗನೋರ್ವನಿಗೆ, "ಜೀವನದ ಅವಿಭಾಜ್ಯ ಅಂಗಗಳು ಯಾವ್ಯಾವುವು?" ಅಂತ ಕೇಳಿದ್ರು. (ತುಂಬ ಬೇಸಿಕ್ ಪ್ರಶ್ನೆ ಅಲ್ವೇನ್ರಿ?!). ಶಿಷ್ಯ, " ಸರ್... ಕಣ್ಣು, ಕಿವಿ, ಮುಗು, ನಾಲಗೆ..." ಅಂತೆಲ್ಲ ಹೇಳಿ "ಮೊಬೈಲ್ ಫೋನ್ ಸಾರ್!" ಅಂದ. ಅವಕ್ಕಾದ ಮೇಷ್ಟ್ರು, "ಮೊಬೈಲಾ.. ಅದ್ರ ಬಗ್ಗೆ ನಾನು ಎಲ್ಲೂ ಹೇಳೇ ಇಲ್ವಲ್ಲೋ" ಅಂದರು. ಬುದ್ಧಿವಂತ ಶಿಷ್ಯ, "ಅದಿಲ್ದೆ ನಮ್ಮ ದಿನಚರಿನೆ ಸಾಗಲ್ಲಾ ಸಾರ್!" ಎಂದ. ಎಲಾ ಹುಡುಗ, ಸ್ಕೂಲ್ಗೆ ಬಾರೋ ದಿನಗಳಲ್ಲೇ ಮೊಬೈಲ್ ವ್ಯಾಮೊಹನಾ! ಅಂದುಕೊಂಡು ಗುರುಗಳು, " ಹೋಗ್ಲಿ ಬಿಡಪ್ಪಾ, ನಿನ್ನ ದಿನಚರಿನಾದ್ರೂ ಹೇಳು" ಅಂದರು. "ಅಯ್ಯೋ ಸೊ ಸಿಂಪಲ್ ಸಾರ್..!" ಎಂದ ಶಿಷ್ಯೋತ್ತಮ, "ಬೆಳಿಗ್ಗೆ ೫.೩೦ಕ್ಕೆ ಮೊಬೈಲ್ನಲ್ಲಿ ಅಲಾರಂ ಆದ ತಕ್ಷಣ ಏಳ್ತೀನಿ..." ಖುಷಿಯಿಂದ ಕಣ್ಣರಳಿಸಿದ ಗುರುವರ್ಯ, "ಓ, ವೆರಿಗುಡ್! ಎವೆರಿವನ್ ಶುಡ್ ಫಾಲ್ಲೋವ್ ಹಿಂ! ಹುಂ ಆಮೇಲೆ?" ಎಂದರು ಹೆಮ್ಮೆಯಿಂದ. ಶಿಷ್ಯ, "ಸಾರ್, ಆಮೇಲೆ ನೇಚರ್ ಕಾಲ್ ಗೆ ಉತ್ತರಿಸಿ..... ಬೆಡ್ ಮೇಲೆ ಕೂರ್ತೀನಿ''. ಕುತೂಹಲಗೊಂಡ ಮೇಷ್ಟ್ರು, ''ಇಷ್ಟ ದೇವರ ಪ್ರಾರ್ಥನೆ ಮಾಡ್ತಿ ಅಂತ ಕಾಣುತ್ತೆ!" ಎಂದಾಗ ಈ ಶಿಷ್ಯೋತ್ತಮನ ಗೆಳೆಯರ ಬಳಗದಿಂದ ಜೋರಾಗಿ ನಗು ಕೇಳಿ ಬಂತು. ಮುಂದುವರಿದ ಶಿಷ್ಯನೆ ಹೇಳಿದ, "ಇಲ್ಲ ಸಾರ್, ಫ್ರೆಂಡ್ಸ್ಗೆ ಗುಡ್ಮಾರ್ನಿಂಗ್ ಎಸ್ಸೆಮ್ಮೆಸ್ ಕಳಿಸ್ತೀನಿ! ಆಮೇಲೆ, ಆಮೇಲೆ, (ತಲೆ ತಗ್ಗಿಸಿ) ಮೊಬೈಲ್ನ ಸೈಲೆಂಟ್ ಮೋಡ್ಗೆ ಹಾಕಿ, ಮತ್ತೆ ಮಲಗಿ ಬಿಡ್ತೀನಿ ಸಾರ್..!" ಎಂದು ಹೇಳಿ ಕೂತು ಬಿಟ್ಟ. ಕಂಗಾಲಾದ ಮೇಷ್ಟ್ರು, "ಅಯ್ಯೋ ಮೂರ್ಖ, ನಾನೇನೋ ಅಂದ್ಕೊಂಡಿದ್ರೆ... " ಎನ್ನುತ್ತಿರುವಾಗಲೇ ಶಿಷ್ಯ ಮತ್ತೆ ಮಾತಾಡಿದ. " ಸಾರ್, ಬೆಳಿಗ್ಗೆ ಮಾತ್ರ ಹೀಗೆ ಮಾಡೋದು. ರಾತ್ರಿ ಎಲ್ಲ ಓದಿಯೇ ಮಲಗೋದು. ಎನಿಲ್ಲಾನ್ದ್ರು ಹನ್ನೆರಡು ಗಂಟೆ ಆಗಿಯೇ ಆಗುತ್ತೆ" ಎಂದ ಫುಲ್ ಕಾನ್ಫಿಡೆನ್ಸ್ ನಿಂದ! ಸ್ವಲ್ಪ ನಿರಾಳ ಎನಿಸಿದಾಗ ಗುರುಗಳು ಖುಷಿಯಾದರು.
"ಆಗ್ಲಪ್ಪಾ.. ರಾತ್ರಿ ದಿನದ ಪಾಠ ಓದಿಯೇ ಮಲಗೋದು ತಾನೆ...? ಅದ್ಕೆ ಪ್ರತಿ ಪರಿಕ್ಷೆನಲ್ಲು ನೀನೆ ಫಸ್ಟ್ ಬರೋದು..." ಎಂದರು. ಅದೇ ಸಮಯಕ್ಕೆ ಸರಿಯಾಗಿ ಈ ಶಿಷ್ಯನ ಪಕ್ಕದ್ಮನೆ ಕ್ಲಾಸ್ಮೇಟ್ ಬಾಂಬ್ ಸಿಡಿಸಿಯೇ ಬಿಟ್ಟ. "ಹೌದು ಸಾರ್..! ಅವನು ದಿನಂಪ್ರತಿ ಓದಿಯೇ ಮಲಗೋದು. ಯಾಕೆಂದ್ರೆ ಕಾಲೇಜ್ ಓದ್ತಿರೋ ಅವ್ರ ಅಕ್ಕ ಮನೆಗೆ ಬರೋದೇ ಲೇಟಾಗಿ. ಅವ್ರು ಅವ್ರ ಬಾಯ್ಫ್ರೆಂಡ್ ಜೊತೆ ಹರಟಿದ ನಂತರ ಇವ್ನಿಗೆ ಮೊಬೈಲ್ ಸಿಗೋದು. ಅಷ್ಟರಲ್ಲಿ ಹನ್ನೆರಡು ಗಂಟೆ ಆಗಿರುತ್ತೆ! ಆಮೇಲೆ ಪಾಪ ಕದ್ದು ಮೆಸೇಜ್ ಓದಬೇಕು!!" ಎಂದಾಗ, ಗುರುವರ್ಯ ಸುಸ್ತು!. ಮತ್ತೊಬ್ಬ ಶಿಷ್ಯ, "ಸಾರ್, ಎಕ್ಸಾಂ ಹಾಲ್ನಲ್ಲಿ ಚೀಟಿ ತರೋದಿಕ್ಕೆ ಬಿಟ್ರೆ ನಾನೂ ಕ್ಲಾಸ್ ಗೆ ಏನು, ಸ್ಟೇಟ್ ಗೆ ಬೇಕಾದರೂ ಫಸ್ಟ್ ಬರ್ತೇನೆ!!" ಎಂದ. ಈ ಶಿಷ್ಯನ ದಿನಚರಿಯ ಸಹವಾಸವೇ ಬೇಡ ಅಂದುಕೊಂಡ ಗುರುಗಳು ಸಾವರಿಸಿಕೊಂಡು ದಿನದ ತರಗತಿ ಕೊನೆ ಮಾಡಿದ್ರು!.
ಅದೊಂದು ದಿನ ನಮ್ಮ ಘನ ರಸ್ತೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಊರಿಗೆ ಹೊರಟಿದ್ದೆ. ಕಿಕ್ಕಿರಿದು ತುಂಬಿದ್ದ ಬಸ್ಸಿಗೆ ಅದ್ಹೇಗೋ ಕಾಲಿರಿಸಿದ್ದಾಯ್ತು. ಯಾಣವನ್ನು ಮುಂಗಡ ಕಾದಿರಿಸಿದ್ದೆ. ತುಂಬಿದ ಬಸ್ನಲ್ಲಿ ಎಲ್ಲರನ್ನು ತಳ್ಳುತ್ತಾ ನನ್ನ ಸೀಟಿನ ಬಳಿ ಬಂದೆ. ನೋಡಿದ್ರೆ ನನ್ನ ಸೀಟಿನಲ್ಲಿ ಅದಾಗಲೇ ಒಬ್ಬ ದಡೂತಿ ಆಸಾಮಿ ಕುಕ್ಕರಿಸಿದ್ದ. ಅವನನ್ನ ಉದ್ದೇಶಿಸಿ, "ಹಲೋ ಬ್ರದರ್, ಇದು ನನ್ನ ಸೀಟು. ದಯವಿಟ್ಟು ಬಿಟ್ಟುಕೊಡಿ" ಎಂದೆ ಸೌಜನ್ಯ ಪೂರ್ವಕವಾಗಿ. ಅವನೂ ನಗುತ್ತಾ, "ಖಂಡಿತ ಬನ್ನಿ, ಯು ಆರ ಆಲ್ವೇಸ್ ವೆಲ್ಕಂ!" ಎಂದ ಕೈ ಕರಣ ಮಾಡುತ್ತಾ. ಅಬ್ಬ ಹೆಚ್ಚು ಚರ್ಚೆ ಇಲ್ದೆ ಸೀಟು ಸಿಕ್ತಲ್ಲ ಅಂತ ಖುಷಿಯಾದೆ. ಇನ್ನೇನು ಸೀಟ್ನಲ್ಲಿ ಕೂರಬೇಕು ಅನ್ನುವಷ್ಟರಲ್ಲಿ ಇಡೀ ಬಸ್ಸೇ ನಡುಗುವಂತೆ, "ಏನಯ್ಯಾ.. ಸ್ವಲ್ಪನಾದ್ರೂ ತಾಳ್ಮೆ ಇಲ್ವೆ? ನಿನ್ನ ಸೀಟು ನಿನಗೆ ಆಯ್ತು. ನಾನೇನು ಹೊತ್ಕೊಂಡು ಹೋಗೋದಿಲ್ಲ!." ಅವನ ಕಣ್ಣು ಕೆಂಡದ ಹಾಗಿತ್ತು!. ನನ್ನ ಗಂಟಲ ಪಸೆ ಆರಿ ಹೋದರೂ ಧೈರ್ಯ ಮಾಡಿ, "ಏನ್ರಿ, ನಾನು ರಿಸರ್ವ್ ಮಾಡಿದ ಸೀಟು ಇದು. ಹದಿನೈದು ರುಪಾಯಿ ಹೆಚ್ಚು ನೀಡಿದೇನೆ. ಅದೂ ಅಲ್ದೆ ನೀವೇ ತಾನೆ ಅಂದವರು, ಆಲ್ವೇಸ್ ವೆಲ್ಕಂ ಅಂತ'' ಎನ್ನುತ್ತಾ ದಬಾಯಿಸಿದೆ. ಅದಕ್ಕಾತ, "ಇರಬಹುದು, ನಿನ್ ಮಾತಿಗೆ ಆಲ್ವೇಸ್ ವೆಲ್ಕಂ ಬೇರೆ ಕೇಡು! ನೀನೇನು ನನ್ನ ಲವರ್ ಬ್ರದರಾ?!" ಎನ್ನುತ್ತಾ ಎಡಗಿವಿಯಿಂದ ತನ್ನ ಮೊಬೈಲ್ನ ಹೆಡ್ ಫೋನ್ ತೆಗೆದ!. ಆಗ್ಲೇ ಸ್ವಾಮಿ ನಂಗೆ ತಿಳಿದದ್ದು, ಆತ ಆಲ್ವೇಸ್ ವೆಲ್ಕಂ ನ ಪೂರ್ಣ ಕುಂಭ ಸ್ವಾಗತ ಕೋರಿದ್ದು ನನಗಲ್ಲ, ಬದಲಿಗೆ ತನ್ನ ಗರ್ಲ್ ಫ್ರೆಂಡ್ ಬ್ರದರ್ಗೆ ಅಂತ!.
ಇದೆ ಗುಂಗಿನಲ್ಲಿ ಮನೆ ಸೇರಿದ್ದಾಯ್ತು. ನಾನು ಬಂದ ವಿಚಾರ ತಿಳಿದು ಹಳೆಯ ಆತ್ಮೀಯ ಗೆಳೆಯ ಮನೆಗೆ ಬಂದ. ಆತನ ಮೊಬೈಲ್ನಲ್ಲಿ infrared ಮಾತ್ರ ಇತ್ತು. ಎಲ್ಲರಿಗೂ ತಿಳಿದಿರುವಂತೆ ಈ ತಂತ್ರಜ್ಞಾನ ದ ಮೂಲಕ ಮಾಹಿತಿ ರವಾನೆ ಆಗಬೇಕಾದರೆ ಎರಡು ಮೊಬೈಲೂ ಅತಿ ಹತ್ತಿರದಲ್ಲಿ ಸಂಪರ್ಕಕ್ಕೆ ಬರಬೇಕು. ಇದನ್ನ ನೋಡಿದ ನನ್ನ ಅಣ್ಣನ ಮಗ ಬಳಿ ಬಂದ. ಕುತೂಹಲದಿಂದ ನನ್ನ ಮುಖಕ್ಕೂ ಮೊಬೈಲ್ಲನ್ನೂ ಸ್ವಲ್ಪ ಹೊತ್ತು ದಿಟ್ಟಿಸಿ ಹೇಳಿದ, "ಚಿಕ್ಕಪ್ಪ, ನಿನಗೆ ಮಾತ್ರ ಅಲ್ಲಾ, ಮೊಬೈಲ್ಗೂ ಗರ್ಲ್ ಫ್ರೆಂಡ್ ಬೇಕಾಗುತ್ತಲ್ಲಾ, ನೋಡು ಎಷ್ಟು ಡೀಪ್ ಆಗಿ ಲವ್ ಮಾಡ್ತಿವೆ..!!!" ಎಂದಾಗ ನಾವು ಮೊಬೈಲ್ ಬೇರ್ಪಡಿಸದೆ ವಿಧಿಯಿರಲಿಲ್ಲ. ಅಳುವುದೋ ನಗುವುದೋ ತಿಳಿಯದೆ ಅಲ್ಲಿಂದ ಕಾಲ್ಕಿತ್ತೆವು!.
Thursday, June 11, 2009
ನನ್ನ ಕ್ಯಾಮಾರ ಕಣ್ಣು
ನನ್ನದೂ ಒಂದು ಬ್ಲಾಗ್ ಇರ್ಲಿ ಅಂತ...!
ನಮಸ್ಕಾರ...!
ಕ್ಕೆ ಸರಿಯಾಗಿ ಅಲ್ದೆ ಹೋದ್ರು, ಪುರುಸೊತ್ತು ಆದಾಗಂತು ಅನ್ನೋದು ಖಂಡಿತ...! ಮತ್ತೊಂದು ವಿಚಾರ. ನನ್ನ ಬ್ಲಾಗ್ನಲ್ಲಿ ಇಂಥದ್ದೇ ಅಂತ ಇರ್ಲಿಕ್ಕಿಲ್ಲ. ಕೆಲವು ಕಟ್ಟುಪಾಡುಗಳು ನಂಗೆ ಜೀರ್ಣ ಆಗೋದಿಲ್ಲ! ಆದ್ರೂ ತಾವು ಈ ಪ್ಲೇಸ್ ನೋಡ್ತಾ ಇರ್ತೀರಿ ಅನ್ನೋ ನಂಬಿಕೆ ನನಗಿದೆ. ಹಾಂ... ಅದೇ ರೀತಿ ಟೈಮ್ ಟೈಮ್ಗೆ ಕಮೆಂಟೂ, ಸಜೆಷನ್ನು ನೀಡ್ತಾ ಇರ್ತೀರಿ ತಾನೆ...? ನಿಮ್ಮ ಪ್ರೀತಿಯ ಸದಾ...

