
ರೋಗಿಗಳ ನಾಡಿ ಮಿಡಿತ ಪರೀಕ್ಷೆ ಮಾಡುವ ಡಾಕ್ಟರ್ ಕೈಯಲ್ಲಿ ವಿಂಟೇಜ್ ಕಾರಿನ ಸ್ಟೇರಿಂಗ್!. ಹೌದು, ಬೆಂಗಳೂರಿನ ಡಾಕ್ಟರ್ ರವಿಪ್ರಕಾಶ್ ಅವರ ಆರೈಕೆಯಲ್ಲಿ ನೂರಕ್ಕೂ ಅಧಿಕ ಐತಿಹಾಸಿಕ ಕಾರುಗಳು ಮತ್ತು ೩೨
ಮೋಟಾರ್ ಬೈಕ್ಗಳು ಆರೋಗ್ಯ ಪೂರ್ಣವಾಗಿವೆ!. ಅಲ್ಲಿ ಇಲ್ಲಿ ಓಡಾಡ್ತ, ನಲಿದಡ್ತಾ ಇವೆ...!
ವಿಂಟೇಜ್ ಕಾರುಗಳನ್ನು ಸಂಗ್ರಹಿಸುವ ಅವರ
ಹವ್ಯಾಸ ಆರಂಭ ಆದದ್ದೇ ಒಂದು ವಿಶೇಷ ರೀತಿಯಲ್ಲಿ. ೧೯೭೯ರಲ್ಲಿ ಮೈಸೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದ
ರ
ವಿಪ್ರಕಾಶ್ ಅವರಿಗೆ ಕಾರ್ ರೇಸ್ ನ ಹುಚ್ಚು. ಈ ಗೀಳು ಅವರನ್ನ ಮದರಾಸ್ಗೆ ಕರೆದೊಯ್ತು. ಅಲ್ಲಿ ಜನರಲ್ ಮಹಾದೇವ್ ಎನ್ನುವವರ ಸನ್ ಬೀಂ ಕಾರನ್ನ ತಮಗೆ ನೀಡುವಂತೆ
ಕೇಳಿದರಂತೆ. ಜನರಲ್
ಇವರಿಗೆ 'ಆಗಲ್ಲ' ಅಂದರಂತೆ. ಅದಾದ ಬಳಿಕ ರವಿಪ್ರಕಾಶ್ ವಾಪಾಸ್ಸದರು. ಆದರೆ, ಕೆಲವು ತಿಂಗಳ ಬಳಿಕ ಜನರಲ್ ಮಹದೇವ್ ಅವರಿಂದ ಒಂದು ಪತ್ರ
ಬಂತು. ಅದರಲ್ಲಿ, ಜನರಲ್ ಸ್ವರ್ಗಸ್ಥ
ರಾಗಿದ್ದಾರೆಂದು, ತಮ್ಮ ಕಾರನ್ನು ರವಿಪ್ರಕಾಶ್ ಅವರಿಗೆ ಉಯಿಲು ಬರೆದಿದ್ದಾರೆಂದು ಮತ್ತು ಕಾರನ್ನು ತೆಗೆದುಕೊಂಡು ಹೋಗುವಂತೆ ತಿಳಿಸಲಾಗಿತ್ತು!. ಹೀಗೆ ಆರಂಭವಾದ ಹವ್ಯಾಸ, ಇಂದು ಹೆಮ್ಮರವಾಗಿ ಬೆಳೆದಿದೆ. ೧೯೦೯ನೆ ಇಸವಿಯ ವೂಲ್ಸೆಯ್ ನಿಂದ ಮೊದಲಾಗಿ,
ಇತ್ತೀಚಿನ ಲಕ್ಷಾಂತರ ರುಪಾಯಿ ಮೊತ್ತದ ಐಶಾರಾಮಿ ಕಾರುಗಳಿವೆ. ಉದಯಪುರದ ಮಹಾರಾಜರ ಜಾಗ್ವಾರ್ ಕಾರು, ಕಚ್ ಮಹಾರಾಜನ
ಕಂದ್ಯುಲೆತ್, ಅಮೇರಿಕಾದಲ್ಲಿ ತಯಾರಾದ ದಿಯಮ್ಲರ್, ರಾಕರ್ ೮೮, ಫೋರ್ಡ್, ಮರ್ಸಿದಿಸ್
ಬೆನ್ಸ್, ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ...! ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ಆಕರ್ಶಿಸೋದು ಅಂದರೆ, ಮಾಜಿ ಪ್ರಧಾನಿ ನೆಹರು ಅವರ ತಂದೆ ಮೋತಿಲಾಲ್ ಅವರನ್ನ ಹೊತ್ತೊಯ್ದ ಕಾರು. ಅದೇ ರೀತಿ ನಮಗೆ ಹೆಮ್ಮೆ ತರುವ ಮತ್ತೊಂದು ವಾಹನವೆಂದರೆ, ರಾಷ್ಟ್ರಕವಿ ಕುವೆಂಪು ಅವರ ಕಾರು.

ತಮ್ಮ ಈ ಹವ್ಯಾಸವನ್ನ ನಿರ್ವಹಿಸಲೆಂದೇ ರಾಜರಾಜೇಶ್ವರಿ ನಗರದ ೧೪ ಎಕರೆ ಫಾರ್ಮ್ ಹೌಸ್ನಲ್ಲಿ ೭ ಶೆಡ್ಗಳನ್ನ ನಿರ್ಮಿಸಿದ್ದಾರೆ. ಅಲ್ಲದೆ, ಈಗಲೂ ದೇಶದಾದ್ಯಂತ ತಮ್ಮ ಹುಡುಕಾಟ ಮುಂದುವರಿಸಿದ್ದಾರೆ. ಈ ಎಲ್ಲ ಕಾರುಗಳ ಮತ್ತು ಬೈಕ್ಗಳ ಆರೋಗ್ಯ ವಿಚಾರಣೆಗಾಗಿ ೧೫ ಮೆಕ್ಯಾನಿಕ್ಗಳ ತಂಡ ಕೆಲಸ ಮಾಡ್ತಿದೆ!. ಇದಕ್ಕೆಲ್ಲ ಲಕ್ಷಾಂತರ ರುಪಾಯಿ ಖರ್ಚು ಒದಗಿದರೂ, ಅದನ್ನು ಹೊರೆ ಎಂದು ಡಾ. ರವಿಪ್ರಕಾಶ್ ಯಾವತ್ತು ಭಾವಿಸಿದ್ದಿಲ್ಲ. ಈ ಬಗ್ಗೆ ಅವರು ಹೇಳೋದು ಇಷ್ಟು, ''ಇಂತಹ ಹವ್ಯಾಸಗಳೇ ಹೀಗೆ. ಖರ್ಚು ವೆಚ್ಚದ ಬಗ್ಗೆ ಇಲ್ಲಿ ಆಲೋಚನೆ ಮಾಡಲೇಬಾರದು. ಈ ಕಾರುಗಳು ಐತಿಹಾಸಿಕ ಮಹತ್ವ ಹೊಂದಿವೆ. ನಾಡಿನ ಇತಿಹಾಸವನ್ನ ನಾಳಿನ ಪೀಳಿಗೆಗೆ ಪರಿಚಯ ಮಾಡ್ಬೇಕು ಅಂತಾದ್ರೆ ಖರ್ಚು ಅನಿವಾರ್ಯ''. ಇವರ ಈ ಕಾರ್ಯಕ್ಕೆ ಪತ್ನಿ ಸಬೀನಾ, ಪುತ್ರಿಯರಾದ ರೂಪಾಲಿ
ಮ
ತ್ತು ಶಿಫಾಲಿ ಅವರಿಂದಲೂ ಸಂಪೂರ್ಣ ಬೆಂಬಲವಿದೆ.
ಮುಂದಿನ ಕೆಲವು ತಿಂಗಳಿನಲ್ಲಿ ತಮ್ಮ ಫಾರ್ಮ್ ಹೌಸ್ನ ನಾಲ್ಕು ಎಕರೆ ಭೂಮಿಯಲ್ಲಿ ವಿಂಟೇಜ್ ಕಾರ್ ಮ್ಯೂಸಿಯಂ ಸ್ಥಾಪಿಸುವ ಗುರಿಯನ್ನು ಡಾ.ರವಿ ಪ್ರಕಾಶ್ ಹೊಂದಿದ್ದಾರೆ. ಇದರಲ್ಲಿ ಸುಮಾರು ೪೫೦ ಕಾರುಗಳನ್ನು ಪ್ರದರ್ಶನಕ್ಕೆ ಇಡುವ ಯೋಜನೆ ಇದೆಯಂತೆ. ಅಲ್ಲದೆ, ಮ್ಯೂಸಿಯಂ ಮೇಲೆ ಹೆಲಿಪ್ಯಾಡ್ ನಿರ್ಮಿಸಿ, ರಸ್ತೆ ಅಪಘಾತದಲ್ಲಿ ಸಿಲುಕಿದವರಿಗೆ ಏರ್ ಅಂಬುಲೆನ್ಸ್ ನಲ್ಲಿ ಚಿಕಿತ್ಸೆ ಒದಗಿಸುವುದು ಇವರ ಮಹತ್ವಾಕಾಂಕ್ಷೆ ಗಳಲ್ಲಿ ಒಂದು.

ಒಟ್ಟಿನಲ್ಲಿ ದೇಶದ ಹಿಂದಿನ ಭವ್ಯ ಚರಿತ್ರೆಯನ್ನು ನವ ಪೀಳಿಗೆಗೆ ತಲುಪಿಸಲು ಶ್ರಮಿಸುತ್ತಿರುವ ಅವರ ಮಹತ್ಕಾರ್ಯಕ್ಕೆ ಜಯ ದೊರೆಯಲಿ ಎಂದು ಹಾರೈಸೋಣ ಅಲ್ವೇ...?
wow good collection....! he must have spend some good amount of money on buying and maintaining them...! Thanks for sharing..!
ReplyDeleteMy pleasure dear... Thanks for your feedback...
ReplyDelete