Wednesday, September 16, 2009

ಬದುಕಲ್ಲಿ ಹಸಿರುಂಟು...

ಹಸಿರಲ್ಲಿ ನಾನುಂಟು ನೀನುಂಟು ಜೀವನವುಂಟು. ಬದುಕಿಗೆ ಆಸರೆ ಇಲ್ಲುಂಟು. ಸಮತೋಲಿತ ಪಯಣದಲ್ಲಿ ಹಿತವುಂಟು.

ಮಾತೆಯ ಮಡಿಲಲ್ಲಿ ಮುತ್ತುಂಟು, ಹಸಿದವಗೆ ಕೈ ತುತ್ತುಂಟು. ಹಿತ ಕಾಯುವ ಸಂಗವುಂಟು.
ಮನ, ಮನೆ ಇಲ್ಲುಂಟು. ಒಲವುಂಟು, ಒಲಿದ ಜೀವಗಳ ಮಿಲನದ ಸೊಗಸುಂಟು.
ಕನಸುಗಳಿಗೆ ಬಲಿತ ರೆಕ್ಕೆ ನೀಡುವ ಮಾರ್ಗವುಂಟು. ಸರಿ ದಾರಿ ತೋರುವ ಅನುಭವದ ಜೊತೆ ನನ್ನ ನಿನ್ನ ಪಯಣವುಂಟು.
ಸಾಗಿದ ಹಾದಿಯನೊಮ್ಮೆ ತಿರುಗಿ ನೋಡಿದರೆ ಎಲ್ಲೆಲ್ಲು ಹಸಿರಿನ ಚಾದರವೇ. ಕಲ್ಲು ಮುಳ್ಳು ನಮಗೇಕೆ, ಕೊನೆಯಲ್ಲಿ ಸಿಕ್ಕ ಹಸಿರೆ ನಮ್ಮ ಜೊತೆಯಿರಲು ಬದುಕಲ್ಲಿ ಖುಷಿಯುಂಟು...
** Please click on the images to see them clear.

3 comments:

  1. hi
    photos chennagive......adakkintaloo hecchu adakke nidida vivarane.......sooper

    ReplyDelete
  2. ಬಹಳ ಸೊಗಸಾದ ಫೋಟೊಗಳು...
    ಅದಕ್ಕೆ ತಕ್ಕ ವಿವರಣೆಗಳು...

    ಖುಷಿಯಾಯಿತು...

    ಅಭಿನಂದನೆಗಳು...

    ReplyDelete
  3. ಮೆಚ್ಚಿಕೊಂಡಿದಕ್ಕೆ ಧನ್ಯವಾದಗಳು ಪ್ರಕಾಶಣ್ಣ. ಇವನ್ನೆಲ್ಲ ಸುಪರ್ ಮ್ಯಾಕ್ರೋ ಮೋಡ್ನಲ್ಲಿ ಕ್ಲಿಕ್ ಮಾಡಿದ್ದು.

    ReplyDelete