Tuesday, June 18, 2013

ಹರಿಹರರ ಸನ್ನಿಧಿಯಲ್ಲಿ..

ದಾವಣಗೆರೆ ಜಿಲ್ಲೆಗೆ ಬಂದ ನಂತರ ಸ್ವಲ್ಪ ತಿರುಗಾಡಬೇಕು. ಊರು ನೋಡಬೇಕು ಎಂದುಕೊಂಡು ವಾರದ ರಜಾದಲ್ಲಿ ಒಂದು ದಿನ ಬೆಳಗ್ಗೆಯೇ ಕ್ಯಾಮೆರಾ, ಬ್ಯಾಗ್ ಬೆನ್ನಿಗೇರಿಸಿ ಬೈಕ್ ಏರಿದೆ. ಎಲ್ಲಿಗೆ ಪಯಣ..? ಗೊತ್ತಿಲ್ಲ..! ಎಲ್ಲಿಗೆ ಹೋಗೋದು ಎಂದು ಹೊಳೀತಿಲ್ಲ..!
 
ಆಗ ಇದ್ದಕ್ಕಿದ್ದಂತೆ ನೆನಪಾಗಿದ್ದು ಜಿಲ್ಲಾ ಕೇಂದ್ರದಿಂದ ಕೇವಲ 14 ಕಿಲೋಮೀಟರ್ ದೂರದಲ್ಲಿರುವ ಹರಿಹರ. ರಸ್ತೆ ತುಂಬಾ ಚೆನ್ನಾಗಿತ್ತು. ಇನ್ನೂ ಮುನ್ನಡೆ ಎಂದು ಪ್ರೇರೇಪಿಸಿತ್ತು. ಎಕ್ಸಲರೇಟರ್ ಹಿಡಿದೇ ಇದ್ದೆ. ಸುಮಾರು 20 ನಿಮಿಷಗಳಲ್ಲೇ ದೇಗುಲ ತಲುಪಿದ್ದೆ.
 
 
ನಕ್ಷತ್ರಾಕಾರದ ಸುಂದರ ಮಂದಿರ. ಹರಿಹರರಿಗೆ ಪ್ರಸನ್ನ ಪರಿಸರ..! ಇತಿಹಾಸದ ಪುಟಗಳಲ್ಲಿ ಇಣುಕಿದರೆ 11ರಿಂದ 13ನೇ ಶತಮಾನದಲ್ಲಿ ಈ ಪ್ರದೇಶ ಹೊಯ್ಸಳರ ಆಡಳಿತದಲ್ಲಿತ್ತೆಂದು ಗೊತ್ತಾಗುತ್ತದೆ. ಗುಹಾರಣ್ಯ ಎಂದೂ ಕರೆಯಲಾಗುತ್ತಿದ್ದ ಇಲ್ಲಿ 12ನೇ ಶತಮಾನದಲ್ಲಿ ಸಂಪೂರ್ಣ ಕಲ್ಲಿನಿಂದಲೇ  ದೇಗುಲ ನಿರ್ಮಾಣ ಮಾಡಲಾಯಿತು. ಈ ದೇಗುಲದ ಮೇಲೂ ಪರಕೀಯರ ದಾಳಿಯ ಕುರುಹು ಇಂದಿಗೂ ಇಲ್ಲಿನ ಕೆತ್ತನೆಗಳಲ್ಲಿವೆ. ತುಂಗಾಭದ್ರಾ ನದಿ ದಡದಲ್ಲಿರುವ ಈ ದೇಗುಲವನ್ನು ನನ್ನ ಕ್ಯಾಮೆರಾ ಕಣ್ಣಿನಲ್ಲಿ ಕಾಣುವ ಯತ್ನ ಇಲ್ಲಿದೆ.
 
ದೀಪಸ್ತಂಭದ ಮೂಲಕ ದೇಗುಲ ಕಂಡಿದ್ದು ಹೀಗೆ.
 
ಗರ್ಭಗುಡಿಯ ಪ್ರವೇಶದ್ವಾರಗಳಲ್ಲಿ ಇದೂ ಒಂದು.
 
ದೇಗುಲದ ಹೊರಾಂಗಣದಲ್ಲಿರುವ ಒಂದು ಕೆತ್ತನೆ.
 
ದೇವಸ್ಥಾನದ ಗೋಡೆಯಲ್ಲಿರುವ ಗೋಪುರ ಮಾದರಿಯ ಕೆತ್ತನೆ.
 
ಗರ್ಭಗುಡಿಯ ಗೋಡೆಯ ಹೊರಗಿರುವ ಏಕದಂತನ ಪ್ರತಿಮೆ.
 
 ನಂದಿಯ ಸುಂದರ ವಿಗ್ರಹ.
 
ಗೋಡೆಗಳ ಮೇಲೆ ಸುಂದರ ಕೆತ್ತನೆಗಳ ಆಕರ್ಷಣೆ.

ದೇವಾಲಯದ ಛಾವಣಿಗೂ ಆಕರ್ಷಕ ಕೆತ್ತನೆಗಳ ಅಲಂಕಾರ. 
ಕಣ್ಮನ ಸೆಳೆಯುವ ಕಲ್ಲಿನ ಕಂಬಗಳ ಕೆತ್ತನೆ.
 

1 comment: